ನಮ್ಮ ಬಗ್ಗೆ (About Us)

ರಾಷ್ಟ್ರೋತ್ಥಾನ ಸಾಹಿತ್ಯ Rashtrotthana Sahitya | ಸಾಹಿತ್ಯ ಸಿಂಧೂ Sahitya Sindhu Prakashana | ಪುಸ್ತಕ ಸಂಚಯ - Books Catalogue ಭಾರತೀಯ ಆದರ್ಶವನ್ನು ಎತ್ತಿ ಹಿಡಿಯುವ, ಜನತೆಗೆ ಸ್ಫೂರ್ತಿ - ಉತ್ಸಾಹಗಳನ್ನೊದಗಿಸುವ ಪುಸ್ತಕ ಪ್ರಕಟಣಾ ಸಂಸ್ಥೆಯಾಗಿ ರಾಷ್ಟ್ರೋತ್ಥಾನ ಸಾಹಿತ್ಯವು 1965ರಲ್ಲಿ ಪ್ರಾರಂಭವಾಯಿತು. ನೂರಾರು ಶತಮಾನಗಳಿಂದ ನಮ್ಮ ರಾಷ್ಟ್ರಜೀವನವನ್ನು ವೈಭವಶಾಲಿಯಾಗಿ ಮಾಡಿದ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ, ತತ್ವ - ಜ್ಞಾನ, ಜೀವನಾದರ್ಶಗಳ ಹಿರಿಮೆಯನ್ನು ಸಾಹಿತ್ಯ ಪ್ರಕಟಣೆಯ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಸಾಮಾಜಿಕ ಚಿಂತನ ಪ್ರಧಾನವಾದ ಗ್ರಂಥಗಳ ಕೊರತೆ ಇದೆ. ಈ ಕೊರತೆಯನ್ನು ತುಂಬಲು ಕನ್ನಡ ಕೃತಿಗಳ ಜೊತೆಗೆ ಇತರ ಭಾಷೆಗಳಿಂದಲೂ ಉತ್ತಮ ರಾಷ್ಟ್ರೀಯ ಸಾಹಿತ್ಯವನ್ನು ಕನ್ನಡಕ್ಕೆ ತರುವ ಯೋಜನೆ ರಾಷ್ಟ್ರೋತ್ಥಾನ ಸಾಹಿತ್ಯದ್ದಾಗಿದೆ. ನಿಜವಾದ ರಾಷ್ಟ್ರೀಯ ಇತಿಹಾಸದ ಗ್ರಂಥಗಳಿಗಂತೂ ಕನ್ನಡದಲ್ಲೇ ಏಕೆ, ಇಡೀ ದೇಶದಲ್ಲೇ ತೀವ್ರ ಕೊರತೆ ಇದೆ. ಇದುವರೆಗೆ ಪಾಶ್ಚಾತ್ಯ ವಿದ್ವಾಂಸರ ಗ್ರಂಥಗಳು, ಅವರ ದೃಷ್ಟಿ - ಧೋರಣೆಗಳ ಜಾಡಿನಲ್ಲೇ ನಮ್ಮ ಇತಿಹಾಸದ ಅಧ್ಯಯನ ಸಾಗಿದೆ. ಇನ್ಮುಂದಾದರೂ ನಮ್ಮ ರಾಷ್ಟ್ರೀಯ ದೃಷ್ಟಿಯಿಂದ ಚರಿತ್ರೆಯನ್ನು ಬರೆಯುವ, ಓದುವ ಅಭ್ಯಾಸವಾಗುವಂತೆ ನಮ್ಮ ರಾಷ್ಟ್ರೀಯ ಇತಿಹಾಸ ಗ್ರಂಥಗಳಿಗೆ 'ರಾಷ್ಟ್ರೋತ್ಥಾನ ಸಾಹಿತ್ಯ'ದಲ್ಲಿ ಅಗ್ರಸ್ಥಾನ ಕೊಡಲಾಗಿದೆ. ವೈಚಾರಿಕ ಲೇಖನ, ಪ್ರಬಂಧ, ಭಾಷಣ, ವ್ಯಕ್ತಿಚಿತ್ರ - ಜೀವನ ಕಥನ, ಸಾಂಸ್ಕೃತಿಕ - ಸಾಮಾಜಿಕ, ಇತಿಹಾಸ - ಸಂಶೋಧನೆ, ಯೋಗ-ಆರೋಗ್ಯ, ವ್ಯಕ್ತಿತ್ವ ವಿಕಾಸ ಇತ್ಯಾದಿ ನಾನಾಮುಖಿ ಸತ್ಪರಂಪರೆಗಳನ್ನು ಪರಿಚಯಿಸುವ ವಿಪುಲ ಸಾಹಿತ್ಯದ ಪ್ರಕಟಣೆ ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನದಿಂದಾಗಿದೆ. 'ಅಜೇಯ', 'ಅದಮ್ಯ', 'ತೋರ್ಬೆರಳು', 'ಶತಮಾನದ ತಿರುವಿನಲ್ಲಿ ಭಾರತ' - ಈ ಕೃತಿಗಳು ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕೃತಗೊಂಡಿವೆ. ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ - ಕನ್ನಡ 620 ಮತ್ತು ಇಂಗ್ಲೀಷ್ 220 - ಮಹಾಪುರುಷರ ಕಿರುಪರಿಚಯ ನೀಡುವ ಭಾರತ ಭಾರತಿ ಪುಸ್ತಕ ಸಂಪದ ಜನಮನ್ನಣೆ ಪಡೆಯಿತು. ಒಂದು ಕೋಟಿಗೂ ಹೆಚ್ಚು ಪುಸ್ತಕಗಳು ಜನರ ಕೈ ಸೇರಿದವು. ಭಾರತ ಭಾರತಿ ಹತ್ತಾರು ಭಾಷೆಗಳಿಗೆ ಅನುವಾದಗೊಂಡಿದೆ. ಶ್ರವಣ ಮಾಧ್ಯಮದ ಮೂಲಕ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸುವುದಕ್ಕಾಗಿ ಗೀತಭಾರತಿ ಇಲ್ಲಿಯವರೆಗೆ 36 ಧ್ವನಿಸುರುಳಿಗಳನ್ನು ಮತ್ತು 6 ಕಾಂಪ್ಯಾಕ್ಟ್ ಡಿಸ್ಕ್ (CD) ಹೊರ ತಂದಿದೆ. ಇದರಲ್ಲಿ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ದೇಶಭಕ್ತಿ ಗೀತೆಗಳು, ಭಜನೆ, ಉಪನ್ಯಾಸದ ಧ್ವನಿಸುರುಳಿಗಳು ಸೇರಿವೆ. ಭಾರತದರ್ಶನ ಉಪನ್ಯಾಸ ಮಾಲಿಕೆಯ ಮೂರು ಧ್ವನಿಸುರುಳಿಗಳು ಕರ್ನಾಟಕದ ಮೂಲೆ ಮೂಲೆಗೂ ತಲುಪಿ ಜನಮನದ ಮೆಚ್ಚುಗೆ ಗಳಿಸಿವೆ. ರಾಷ್ಟ್ರೋತ್ಥಾನ ಸಾಹಿತ್ಯ, ಸಾಹಿತ್ಯ ಸಿಂಧು ಪ್ರಕಾಶನದ ಈವರೆಗಿನ ಪ್ರಕಟಣೆಗಳಲ್ಲಿ ಲಭ್ಯವಿರುವ ಕೃತಿಗಳ ಆನ್‌ಲೈನ್‌ ಪಟ್ಟಿ ಇದಾಗಿದೆ. ನೀವು ಈ ಪಟ್ಟಿಯಲ್ಲಿರುವ ಪುಸ್ತಕಗಳನ್ನು ಸೆಲೆಕ್ಟ್‌ ಮಾಡಿಕೊಂಡು ಕೆಳಗೆ ನೀಡಲಾದ ರಿವ್ಯೂ ಆರ್ಡರ್‌ ಕ್ಲಿಕ್‌ ಮಾಡಿ ವಾಟ್ಸಪ್‌ ಅಥವಾ ಇಮೇಲ್‌ ಬಟನ್‌ ಕ್ಲಿಕ್‌ ಮಾಡಿ ಕಳುಹಿಸಿದರೆ ಅದು ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ತಲುಪುತ್ತದೆ. ನಮ್ಮ ತಂಡದ ಸದಸ್ಯರು ನಿಮ್ಮನ್ನು ಸಂಪರ್ಕಿಸಿ ಆ ಪುಸ್ತಕಗಳ ಬೆಲೆ, ರಿಯಾಯಿತಿ, ಸಾಗಾಣೆ ವೆಚ್ಚ ಇತ್ಯಾದಿ ಮಾಹಿತಿಗಳನ್ನು ನಿಮಗೆ ನೀಡಿ ನಿಮಗೆ ಪುಸ್ತಕವು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಸಹೃದಯಿ ಓದುಗರಿಂದ ನಿರಂತರವಾಗಿ ಸಹಕಾರ - ಪ್ರೋತ್ಸಾಹ ಒದಗಿಬರಲಿ ಎಂಬುದು ನಮ್ಮ ಹೃದಯದಾಳದ ಹಾರೈಕೆ.